ಧ್ಯೇಯೋದ್ದೇಶಗಳು ಹಾಗೂ ಸಮಾಜ ಪರಿವರ್ತನೆಯ ಕಲ್ಯಾಣ ಕಾರ್ಯಗಳು

  1. ಬಸವಾದಿ ಶರಣರ ಪರಿಪೂರ್ಣ ವಚನಗಳ ತತ್ವಸಾರ ಸಾರುವ "ವಚನ ಧರ್ಮದ ಸಮಗ್ರ ವಚನಸಾರ" ಒಂದು ಕೋಟಿ ಪುಸ್ತಕಗಳನ್ನು ಮುದ್ರಿಸಿ, ಮನೆ-ಮನಗಳಿಗೆ ಮುಟ್ಟಿಸುವುದು.
  2. 770 ಅಮರಗಣಂಗಳ ತತ್ವ ಸಂದೇಶಗಳನ್ನು, ಪ್ರತಿದಿನ ಟಿವಿ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದು.
  3. ಬಸವ ತತ್ವ ಪ್ರಚಾರದ ಕಮ್ಮಟಗಳನ್ನು ಜಿಲ್ಲಾವಾರು, ತಾಲ್ಲೂಕುವಾರು, ಗ್ರಾಮವಾರು ನಡೆಸುವುದು.
  4. ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ರೀತಿಯಲ್ಲಿ, ವಚನ ಸಾಹಿತ್ಯ ಸಮ್ಮೇಳನ, ಶರಣರ ಸ್ವರವಚನಗಳನ್ನು ಸಂಗೀತಕ್ಕೆ ಅಳವಡಿಸಿ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುವಂತೆ, ಸರ್ಕಾರವನ್ನು ಒತ್ತಾಯಿಸುವುದು.
  5. ವಚನ ಸಾಹಿತ್ಯದ ಓಲೆಗರಿಗಳನ್ನು ಸಂಶೋಧಿಸಿ, ಸಂಗ್ರಹಿಸಿ ಪ್ರಕಟಿಸಲು, ಪ್ರಾಚ್ಯವಸ್ತು ಇಲಾಖೆಯಲ್ಲಿ ಶಾಖೆಗಳನ್ನು ತೆರೆಯುವಂತೆ, ಸರ್ಕಾರಕ್ಕೆ ಒತ್ತಾಯ ಪಡಿಸುವುದು ಹಾಗೂ ಇದಕ್ಕೆ ಪೂರಕವಾದ ವಾತವರಣವನ್ನು ನಿರ್ಮಿಸುವುದು.
  6. ದಲಿತ ಮತ್ತು ಹಿಂದುಳಿದ ಪ್ರದೇಶಗಳಿಗೆ ಹೋಗಿ, ಅವರಿಗೆ ಆತ್ಮ ಗೌರವ ಹೆಚ್ಚಿಸಿ, ಕೀಳರಿಮೆಯನ್ನು ಹೋಗಲಾಡಿಸಿ ಅವರಿಗೆ, ನೈತಿಕ ಬಲವನ್ನು ತುಂಬುವ ಹಾಗೂ ದೀನದಲಿತರ ಹೃದಯದಲ್ಲಿ ಬಸವಣ್ಣನವರನ್ನು ಕಾಣುವ ಪ್ರಯತ್ನವನ್ನು, ನಮ್ಮ ಪ್ರತಿಷ್ಠಾನದ ಮೂಲಕ ಮಾಡುವುದು.
  7. ಬಸವಾದಿ ಶರಣರು ಮಾನವಕುಲಕ್ಕೆ ನೀಡಿರುವ ಗುರು, ಲಿಂಗ, ಜಂಗಮದ ತತ್ವದ ಪರಿಕಲ್ಪನೆಯನ್ನು, ಅರ್ಥೈಸುವ ಮತ್ತು ಅಷ್ಟಾವರಣ, ಪಂಚಾಚಾರ, ಷಟ್‍ಸ್ಥಲಗಳಂತಹ ಬಸವ ಧರ್ಮದ ಸಂಸ್ಕಾರಗಳನ್ನೊಳಗೊಂಡ ತರಬೇತಿ ಕಮ್ಮಟಗಳನ್ನು, ದಾಸೋಹಿಗಳ ಸಹಾಯದೊಂದಿಗೆ ಮಾಡುವುದು.
  8. ಕರ್ನಾಟಕ ಮತ್ತು ಬೇರೆ ರಾಜ್ಯಗಳಲ್ಲಿ, ಶತ ಶತಮಾನದಿಂದ ಮಠ ಮಂದಿರ ನಿರ್ಮಿಸಿಕೊಂಡು, ಸಮಾಜ ಸೇವೆ ಮತ್ತು ಬಸವ ಧರ್ಮ ಪ್ರಚಾರ ಮಾಡಿಕೊಂಡು ಬಂದಿರುವ, ಘನ ಮಠಗಳ ಅನನ್ಯ ಸೇವೆಯನ್ನು ಗುರುತಿಸಿ, ಅಂಥವುಗಳನ್ನು ಚಿತ್ರೀಕರಿಸಿ, ಎಲ್ಲರಿಗೂ ತಿಳಿಯುವಂತೆ ಸಾಕ್ಷ್ಯ ಚಿತ್ರಗಳನ್ನು ತಯಾರಿಸುವುದು.
  9. ಬಸವ ಧರ್ಮದ ಉಳಿವು, ಅಭಿವೃದ್ಧಿ ಮತ್ತು ಪ್ರಚಾರಕ್ಕಗಿ ಶ್ರಮಿಸಿ ಮಡಿದವರ ಹೆಸರಿನಲ್ಲಿ, ಪ್ರಶಸ್ತಿಗಳನ್ನು ಸ್ಥಾಪಿಸಿ, ಬಸವ ತತ್ವ ಪ್ರಚಾರವನ್ನು ಈ ಪ್ರತಿಷ್ಠಾನದ ಮೂಲಕ ನಡೆಸುವುದು.
  10. ಸಮಾಜದಲ್ಲಿ ತುಂಬಿರುವ ಜಾತೀಯತೆ, ಮೂಢನಂಬಿಕೆಗಳನ್ನು ಹಾಗೂ ಭ್ರಷ್ಟಾಚಾರ ಮತ್ತು ಕಂದಾಚಾರಗಳ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸುವುದು.